Note sull'episodio
ಈ ಆಗಸ್ಟ್ 15 ರಂದು, ದೇಶಾದ್ಯಂತ ತ್ರಿವರ್ಣ ಧ್ವಜ ಹಾರಾಡುತ್ತಿದ್ದಂತೆ, ಹುಬ್ಬಳ್ಳಿಯ ಬೆಂಗೇರಿಯನ್ನು ನೆನಪಿಸಿಕೊಳ್ಳಿ ಏಕೆಂದರೆ, ಅದು ತನ್ನ ಪ್ರಯಾಣವನ್ನು ಪ್ರಾರಂಭಿಸುವುದು ಇಲ್ಲಿಯೇ. ಇಲ್ಲಿ, ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಮಹಿಳೆಯರು ರಾಷ್ಟ್ರಧ್ವಜವನ್ನು ಸಂಪೂರ್ಣವಾಗಿ ಕೈಯಿಂದ ನೂಲುತ್ತಾರೆ, ನೇಯುತ್ತಾರೆ ಮತ್ತು ಹೊಲಿಯುತ್ತಾರೆ ಹಾಗು ಸ್ವಾತಂತ್ರ್ಯ ಹೋರಾಟದಲ್ಲಿ ಜನಿಸಿದ ಕರಕುಶಲತೆಯನ್ನು ಜೀವಂತವಾಗಿರಿಸುತ್ತಾರೆ. ಆದರೆ ಪಾಲಿಯೆಸ್ಟರ್ ಧ್ವಜಗಳಿಗೆ ಅನುಮತಿ ಸಿಕ್ಕ ನಂತರ, ಈ ಸಂಪ್ರದಾಯದ ಭವಿಷ್ಯ ಅನಿಶ್ಚಿತತೆಯಲ್ಲಿದೆ. ನೂರಕ್ಕೆ ನೂರು ಕರ್ನಾಟಕದಲ್ಲಿ, ಬಾಗಲಕೋಟೆಯ ಹತ್ತಿಯಿಂದ ಹುಬ್ಬಳ್ಳಿಯ ಅಂತಿಮ ಹಂತದವರೆಗಿನ ಪ್ರಯಾಣವನ್ನು ತಿಳಿಯುತ್ತ, ಇತಿಹಾಸದ ಭಾರ ಮತ್ತು ಸ್ವಾತಂತ್ರ್ಯದ ಚೈತನ್ಯವನ್ನು ಹೊತ್ತು ಕೆಲಸ ಮಾಡುವ ಮಹಿಳೆಯರನ್ನು ಭೇಟಿಯಾಗುತ್ತೇವೆ.
This August 15, as the tricolour flutters across the country, remember the quiet lanes of Bengeri in Hubballi — where it begins its journey. Here, women at the Karnataka Khadi Gramodyoga Samyukta Sangha spin, weave and stitch t ...